newsics.com
ನವದೆಹಲಿ: ಈ ಬಾರಿ ಮುಂಗಾರು 4ದಿನ ವಿಳಂಬ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ ಮೊದಲ ವಾರದಲ್ಲಿ ಕೇರಳ, ಕರ್ನಾಟಕವನ್ನು ಮುಂಗಾರು ಮಾರುತಗಳು ಪ್ರವೇಶವಾಗಲಿದೆ ಎಂದು ಹೇಳಿದೆ.
ಮೇ 27ಕ್ಕೆ ಮುಂಗಾರು ಮಾರುಗಳು ಕೇರಳ ಪ್ರವೇಶಿಸಬಹುದು ಎಂದು ಐಎಂಡಿ ತಿಳಿಸಿತ್ತು. ಇದೀಗ ಎಲ್ ನಿನೋ ಎಫೆಕ್ಟ್ ಕಾರಣ ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶ ನಾಲ್ಕು ದಿನ ವಿಳಂಬವಾಗಬಹುದು ಎನ್ನಲಾಗಿದೆ.
ಈಗಾಗಲೇ ದಕ್ಷಿಣ ಶ್ರೀಲಂಕಾವನ್ನು ಪ್ರವೇಶಿಸಿದ್ದು, ಕೇಳರದ ಕಡೆಗೆ ಮಾರುತಗಳು ಚಲಿಸಲಾರಂಭಿಸಿವೆ ಎಂದು ಇಲಾಖೆ ತಿಳಿಸಿದೆ.
ಅಂದಹಾಗೆ ದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.