Thursday, June 17, 2021

ಯುವತಿ‌ ಮೇಲೆ 25 ಕಾಮುಕರಿಂದ ಸಾಮೂಹಿಕ ಅತ್ಯಾಚಾರ

newsics.com

ನವದೆಹಲಿ: 25 ಕಾಮುಕರು ಯುವತಿ ಮೇಲೆ ಗ್ಯಾಂಗ್‌ ರೇಪ್ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿಯ ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಸ್ನೇಹಿತನ ಸಲಹೆಯಂತೆ ಪೋಷಕರ ಭೇಟಿಗೆಂದು ತೆರಳಿದ್ದಾಗ ಈ ಘಟನೆ ಸಂಭವಿಸಿದೆ.

ಪೋಷಕರನ್ನು ಭೇಟಿ ಮಾಡಿಸುತ್ತೇನೆಂದು ನಂಬಿಸಿ ಆಕೆಯನ್ನು ಕರೆಸಿಕೊಂಡಿದ್ದ ಫೇಸ್’ಬುಕ್ ಸ್ನೇಹಿತ ಈ‌ ಕೃತ್ಯಕ್ಕೆ ಕಾರಣ ಎಂದು ದೂರಲಾಗಿದೆ. ಸ್ನೇಹಿತನ ಮಾತು ನಂಬಿ ಬಂದ ಯುವತಿ ಮೇ 3 ರಂದು ರಾತ್ರಿ ಮತ್ತು ಬೆಳಗ್ಗೆ 25 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು. ಘಟನೆ ನಡೆದು 9 ದಿನಗಳ ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಸುಮಾರು ನಾಲ್ಕು ವರ್ಷಗಳಿಂದ ವಾಸವಿದ್ದಳು. ಯುವತಿಯ ಫೇಸ್‌ಬುಕ್ ಸ್ನೇಹಿತ ಅವಳನ್ನು ಮೊಬೈಲ್’ನಲ್ಲೇ ಮದುವೆ ಪ್ರಪೋಸ್ ಮಾಡಿದ್ದ. ಸ್ವಲ್ಪ ಸಮಯದ ನಂತರ ಮದುವೆ ಬಗ್ಗೆ ಪ್ರಸ್ತಾಪಿಸಿ, ತನ್ನ ಹೆತ್ತವರಿಗೆ ಪರಿಚಯಿಸಲು ಯುವಕ ಮುಂದಾಗಿದ್ದ. ನಂತರ 23 ವರ್ಷದ ವ್ಯಕ್ತಿ ಯುವತಿಯನ್ನು ಹೊಡಾಲ್‌ ಪ್ರದೇಶಕ್ಕೆ ಬರುವಂತೆ ಹೇಳಿದ್ದಾನೆ. ಮೇ 3 ರಂದು ಯುವತಿ ಹೊಡಾಲ್‌ಗೆ ಪ್ರಯಾಣಿಸಿ ವ್ಯಕ್ತಿಯನ್ನು ಭೇಟಿಯಾಗಿದ್ದರು. ಆದರೆ, ಹೆತ್ತವರನ್ನು ಭೇಟಿಯಾಗಲು ಕರೆದೊಯ್ಯುವ ಬದಲು ಸಾಗರ್ ಅವಳನ್ನು ರಾಮಘರ್ ಗ್ರಾಮದ ಅರಣ್ಯಕ್ಕೆ ಕರೆದೊಯ್ದಿದ್ದಾನೆ. ಸಾಗರ್ ಸಹೋದರ ಮತ್ತು ಅವನ ಸ್ನೇಹಿತರು ಕಾಡಿನ ಟ್ಯೂಬ್‌ವೆಲ್ ಬಳಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.

ಯುವತಿ ಸ್ಥಳಕ್ಕೆ ತಲುಪಿದಾಗ ಆರೋಪಿಗಳು ಅವಳ ಮೇಲೆ ಗುಂಡು ಹಾರಿಸಿ ಅತ್ಯಾಚಾರ ಮಾಡಿದ್ದಾರೆ. ಮರುದಿನ ಆಕೆಯನ್ನು ಆಕಾಶ್ ಎಂಬ ವ್ಯಾಪಾರಿ ಬಳಿ ಕರೆದೊಯ್ದಿದ್ದು, ಈ ಸ್ಥಳದಲ್ಲೂ ಆಕೆಯನ್ನು ಐವರು ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯ ಸ್ಥಿತಿ ಹದಗೆಟ್ಟಾಗ ಆರೋಪಿಗಳು ಅವಳನ್ನು ಬದರ್‌ಪುರ ಗಡಿಯ ಬಳಿ ಎಸೆದು ಪರಾರಿಯಾಗಿದ್ದಾರೆ.

ಯುವತಿ ಹಾಸನಪುರ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಮೇ 12 ರಂದು ದೂರು ದಾಖಲಿಸಿದ್ದಾಳೆ. ಯುವತಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಶುಕ್ರವಾರ ಸಾಗರ್‌ನನ್ನು ಬಂಧಿಸಿದ್ದಾರೆ.

ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ- ಏಮ್ಸ್ ಮುಖ್ಯಸ್ಥ

ಮತ್ತಷ್ಟು ಸುದ್ದಿಗಳು

Latest News

ಅರಾವಳಿ ಪರ್ವತ ಭೂಮಿ ಅತಿಕ್ರಮಣ ತೆರವು: ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

newsics.com ನವದೆಹಲಿ: ಅರಾವಳಿ ಪರ್ವತ ವ್ಯಾಪ್ತಿಯ ಭೂ ಪ್ರದೇಶದಲ್ಲಿ ನಿರ್ಮಿಸಲಾಗಿರುವ 10000 ವಸತಿ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಯಾವುದೇ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೂನ್ ಏಳರಂದು...

ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ತಡೆ

newsics.com ಬೆಂಗಳೂರು: ರಾಜ್ಯ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ 2020-21 ರ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಸರ್ಕಾರ ಹೇಳಿದ್ದು, ಈ...

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ ಯೋಗೇಶ್ವರ್

newsics.com ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಕೂಡ ರಾಜ್ಯ ಬಿಜೆಪಿ ನಾಯಕರ ಜತೆ ಸಮಾಲೋಚನೆ ಮುಂದುವರಿಸಿದ್ದಾರೆ. ಈ ಮಧ್ಯೆ  ಅರುಣ್...
- Advertisement -
error: Content is protected !!