newsics.com
ಶ್ರೀನಗರ: ಪ್ರತಿಭಟನೆಗಳು, ಪ್ರಕ್ಷುಬ್ಧ ಪರಿಸ್ಥಿತಿ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಗಾಗಿ ಸೇಬು ಉತ್ಪಾದನೆ ಕುಸಿತ ಕಂಡಿದ್ದು, ಉದ್ಯಮಕ್ಕೆ ಭಾರೀ ನಷ್ಟವಾಗುವ ಸಾಧ್ಯತೆಯಿದೆ.
ಕಾಶ್ಮೀರದಿಂದ ಪ್ರತಿವರ್ಷ 20 ಲಕ್ಷ ಮೆಟ್ರಿಕ್ ಟನ್‌ನಷ್ಟು ಸೇಬು ರಫ್ತಾಗುತ್ತದೆ. ಇದರಿಂದಾಗಿ ತೋಟಗಾರಿಕೆ ಇಲಾಖೆಗೆ ಸುಮಾರು ₹8,000ರಿಂದ ₹9,000 ಕೋಟಿ ಆದಾಯ ಹರಿದುಬರುತ್ತದೆ. ಆದರೆ ಈ ವರ್ಷ ಉತ್ಪಾದನೆ, ಗುಣಮಟ್ಟ ಕುಸಿದಿರುವುದರಿಂದ ಕಾಶ್ಮೀರದ ಸೇಬು ಉದ್ಯಮ ತೀರಾ ಹಿನ್ನಡೆ ಅನುಭವಿಸುವ ಸಂಭವ ಹೆಚ್ಚಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ಪಾದನೆಯಲ್ಲಿ ಶೇಕಡ 30ರಿಂದ 40ರಷ್ಟು ಕುಸಿತವಾಗಿದೆ. ಉತ್ಪಾದನೆಯಷ್ಟೇ ಅಲ್ಲ. ಸೇಬುಗಳ ಗುಣಮಟ್ಟವೂ ಕುಸಿದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ನಡೆದ ಪ್ರತಿಭಟನೆಗಳು ಹಾಗೂ ಸರ್ಕಾರ ಹೇರಿದ ನಿರ್ಬಂಧಗಳಿಂದಾಗಿ ಕಳೆದ ವರ್ಷ ಸೇಬು ರಫ್ತಿನಲ್ಲಿ ಒಂದು ಲಕ್ಷ ಮೆಟ್ರಿಕ್ ಟನ್‌ನಷ್ಟು ಕುಸಿತವಾಗಿದೆ. ಮಾರುಕಟ್ಟೆಯಲ್ಲಿ ‘ಎ’ದರ್ಜೆಯ ಸೇಬುಗಳ ಕೊರತೆ ಇದೆ ಎಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಹಣ್ಣಿನ ಮಂಡಿಯ ವರ್ತಕ ಬಿಲಾಲ್ ಅಹ್ಮದ್ ಹೇಳಿದ್ದಾರೆ.
ಮುಟ್ಟುಗೋಲು ವಾಹನಗಳಲ್ಲೇ ತರಕಾರಿ ಬೆಳೆದರು ಪೊಲೀಸರು…!
ನೀಟ್ ಪರೀಕ್ಷೆಗೆ ಕ್ಷಣಗಣನೆ ಆರಂಭ: ತಮಿಳುನಾಡಿನಲ್ಲಿ ನಾಲ್ವರ ಆತ್ಮಹತ್ಯೆ
ವೀಲಿಂಗ್ ವಿರೋಧಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ