newsics.com
ನವದೆಹಲಿ: ಮೇ 21 ದೇಶಾದ್ಯಂತ ‘ಭಯೋತ್ಪಾದನೆ ನಿಗ್ರಹ ದಿನ’ ವಾಗಿ ಆಚರಿಸುವಂತೆ ಸೂಚಿಸಿ ಕೇಂದ್ರಾಡಳಿತ ಪ್ರದೇಶ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ.
ಉಗ್ರವಾದ ಜನಸಾಮಾನ್ಯರನ್ನು ಹೇಗೆ ಸಂಕಷ್ಟಕ್ಕೆ ನೂಕಿದೆ ಎಂದು ತೋರಿಸುವ ಮೂಲಕ ದೇಶದ ಯುವಕರನ್ನು ಹಿಂಸಾಚಾರದಿಂದ ಉಗ್ರವಾದದಿಂದ ದೂರವಿರುವಂತೆ ನೋಡಿಕೊಳ್ಳುವುದೇ ದಿನದ ಆಚರಣೆಯ ಉದ್ದೇಶವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆಗಳು ಸರ್ಕಾರಿ ಕಚೇರಿಗಳು ಸಾರ್ವಜನಿಕ ಸಂಸ್ಥೆಗಳಲ್ಲಿ ಉಗ್ರ ನಿಗ್ರಹ ಶಪಥವನ್ನು ಕೈಗೊಳ್ಳಬೇಕು ಸಾಮಾಜಿಕ ಮಾಧ್ಯಮಗಳ ಮೂಲಕವೂ ಭಯೋತ್ಪಾದನೆಯ ಸಂದೇಶಗಳನ್ನು ರವಾನಿಸಬೇಕು ಎಂದು ತಿಳಿಸಿದೆ.