ಮುಂಬೈ: ದೇಶದ ಪ್ರತಿಷ್ಠಿತ ಬಿಗ್ ಬಜಾರ್ ಸೂಪರ್ ಮಾರ್ಕೇಟ್ ಶೀಘ್ರದಲ್ಲಿ ರಿಲಯನ್ಸ್ ಪಾಲಾಗಲಿದೆ ಎಂಬ ಮಾತು ಉದ್ಯಮ ವಲಯದಲ್ಲಿ ಕೇಳಿಬರುತ್ತಿದೆ. ಮಾತುಕತೆ ನಿರ್ಣಾಯಕ ಹಂತ ತಲುಪಿದ್ದು, ರಿಲಯನ್ಸ್ ಬಿಗ್ ಬಜಾರ್ ನಡುವೆ ಒಪ್ಪಂದ ನಡೆಯಲಿದೆ ಎಂದು ವರದಿಯಾಗಿದೆ. ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಬಿಗ್ ಬಜಾರ್ ಹೆಸರು ವಾಸಿಯಾಗಿದೆ.
ದೇಶದ ಯುವ ಜನಾಂಗದ ಖರೀದಿ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ಬಿಗ್ ಬಜಾರ್ ಮಾರುಕಟ್ಟೆ ಅಭಿವೃದ್ದಿಪಡಿಸಲಾಗಿದೆ. ಮೆಟ್ರೋ ನಗರಗಳು ಮತ್ತು ಇತರ ಮಹಾನಗರಗಳಲ್ಲಿ ಕೂಡ ಬಿಗ್ ಬಜಾರ್ ತನ್ನದೇ ಆದ ಬಳಕೆದಾರರ ಸಮೂಹ ಹೊಂದಿದೆ.
ಕಿಶೋರ್ ಬಿಯಾನಿ ಈ ಬಿಗ್ ಬಜಾರ್ ಸಂಸ್ಥೆಯ ಪ್ರವರ್ತಕರಾಗಿದ್ದಾರೆ. ಹೆಚ್ಚಿನ ಪಾಲನ್ನು ಮಾರಾಟ ಮಾಡಲು ಅವರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬಿಗ್ ಬಜಾರ್ ಮಾರುಕಟ್ಟೆ ಮೌಲ್ಯ 12000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.