newsics.com
ಜನಪ್ರಿಯ ವ್ಯಕ್ತಿಗಳು ಬಳಸಿರುವ ವಸ್ತುಗಳಿಗೆ ಭಾರಿ ಬೇಡಿಕೆ ಇರುತ್ತದೆ. ದೊಡ್ಡ ಪ್ರಮಾಣದ ಹಣ ತೆತ್ತು ಅವುಗಳನ್ನು ಖರೀದಿಸುವವರು ಇರುತ್ತಾರೆ. ಇದೀಗ ನೃತ್ಯಲೋಕದ ಅಚ್ಚಳಿಯದ ಹೆಸರು ಮೈಕಲ್ ಜಾಕ್ಸನ್ ಅವರು ಧರಿಸುತ್ತಿದ್ದ ಟೋಪಿ ಬರೋಬ್ಬರಿ 68 ಲಕ್ಷಕ್ಕೆ ಮಾರಾಟವಾಗಿದೆ.
ಪ್ಯಾರಿಸ್ನಲ್ಲಿ ಮೈಕಲ್ ಜಾಕ್ಸನ್ ಟೋಪಿಯನ್ನು ಹರಾಜಿಗೆ ಇಡಲಾಗಿತ್ತು. ಈ ಟೋಪಿ ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿದೆ. ಭರ್ಜರಿ ಮೊತ್ತದ ಬಗ್ಗೆ ಜನ ಶಾಕ್ ಆಗಿದ್ದು, ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.
ಡ್ಯಾನ್ಸ್ ನ ದಿಗ್ಗಜ ಮೈಕಲ್ ಜಾಕ್ಸನ್ ಅವರು ಮುಖಕ್ಕೆ ಅಡ್ಡಲಾಗಿ ಟೋಪಿ ಇಟ್ಟುಕೊಳ್ಳುತ್ತಿದ್ದರು. ಈ ಕಾರಣದಿಂದ ಆ ಟೋಪಿ ಸಾಕಷ್ಟು ಸುದ್ದಿ ಆಗಿತ್ತು. ಈಗ ಇದು ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿ ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಕಳೆದ ವರ್ಷ ಮೈಕಲ್ ಜಾಕ್ಸನ್ ಅವರ ಗಿಟಾರ್ ಮೂರು ಕೋಟಿ ರೂಪಾಯಿಗೆ ಮಾರಾಟವಾಗಿತ್ತು.