newsics.com
ಚಂಡೀಗಢ: ಅಥ್ಲೀಟ್ ದಿಗ್ಗಜ, ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಆರೋಗ್ಯ ಸ್ಥಿತಿ ಮತ್ತೊಮ್ಮೆ ಗಂಭೀರವಾಗಿದ್ದು, ಪಿಜಿಐಎಂಇಆರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲು ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಶುಕ್ರವಾರ (ಜೂ. 18) ತಿಳಿಸಿವೆ.
ಕೊರೋನಾಗೆ ತುತ್ತಾಗಿದ್ದ ಅವರನ್ನು ಈ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಆಕ್ಸಿಜನ್ ಪ್ರಮಾಣವೂ ಇಳಿಕೆಯಾಗಿದೆ ಎಂದು ಹೇಳಲಾಗಿದೆ. ವೈದ್ಯರ ತಂಡವು ನಿಗಾ ವಹಿಸುತ್ತಿದೆ ಎಂದು ಪಿಜಿಐಎಂಆರ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.