newsics.com
ಹೈದ್ರಾಬಾದ್: ತೆಲಂಗಾಣದಲ್ಲಿ 1913ರಲ್ಲಿ ಆರನೇ ನಿಜಾಮ್ ಮಹಬೂಬ್ ಅಲಿ ಖಾನ್ ನಿರ್ಮಿಸಿದ್ದ ಅಸೆಂಬ್ಲಿ ಕಟ್ಟಡದ ಮಿನಾರ್ ಮಂಗಳವಾರ (ಫೆ.23) ಭಾಗಶಃ ಕುಸಿದಿದೆ.
ಕುಸಿತದ ಸಪ್ಪಳ ಕೇಳಿ ಒಳಗೆ ಕುಳಿತಿದ್ದ ಸಿಬ್ಬಂದಿ ಹೊರಗೆ ಓಡಿ ಬಂದಿದ್ದು,ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಹಿಂದೆ ನಿಜಾಮ್ ಜನರನ್ನು ಭೇಟಿಯಾಗಲು ಹೈದರಾಬಾದ್ ಸಿಟಿ ಟೌನ್ ಹಾಲ್ ಆಗಿ ಕಟ್ಟಡವನ್ನು ಬಳಸಲಾಗುತ್ತಿತ್ತು. ಸ್ವಾತಂತ್ರ್ಯಾ ನಂತರ ಹೊಸ ಕಟ್ಟಡ ನಿರ್ಮಿಸಿದರೂ ಹಳೆಯ ಕಟ್ಟಡದಲ್ಲಿ ಅಸೆಂಬ್ಲಿ ಹಾಲ್ ಎಂದು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಈಗ ಈ ಹಳೆಯ ಕಟ್ಟಡದ ಮಿನಾರ್ ಕುಸಿತವಾಗಿದೆ.