newsics.com
ಆಗ್ರಾ: ಉತ್ತರ ಪ್ರದೇಶದಲ್ಲಿ ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಹತ್ಯೆ ಮಾಡಿದ್ದಾನೆ. ಯುವತಿಯ ತಾಯಿ ಕೂಡ ಭಗ್ನ ಪ್ರೇಮಿ ನಡೆಸಿದ ದಾಳಿಯಂದ ಮೃತಪಟ್ಟಿದ್ದಾರೆ.
ಆಗ್ರಾದಲ್ಲಿ ಈ ಘಟನೆ ನಡೆದಿದೆ. ಗೋವಿಂದ್ ಎಂಬಾತ ಯುವತಿ ಜತೆ ಮದುವೆಯಾಗಲು ಇಚ್ಚಿಸಿದ್ದ. ಆತ ಯುವತಿಯ ಮನೆ ಬಳಿ ವಾಸಿಸುತ್ತಿದ್ದ. ಆದರೆ ಈ ಮದುವೆ ಯುವತಿಗೆ ಇಷ್ಟ ಇರಲಿಲ್ಲ ಎಂದು ವರದಿಯಾಗಿದೆ.
ಇದರಿಂದ ಕೋಪಗೊಂಡ ಗೋವಿಂದ ಯುವತಿಯ ಮನೆಗೆ ನುಗ್ಗಿ, ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಯುವತಿಯ ನಿಕಟ ಸಂಬಂಧಿಯೊಬ್ಬರಿಗೆ ಕೂಡ ಗಂಭೀರ ಗಾಯಗಳಾಗಿದೆ. ಆರೋಪಿ ಗೋವಿಂದ ತಲೆ ಮರೆಸಿಕೊಂಡಿದ್ದಾನೆ.
ಆರೋಪಿ ಬಂಧನಕ್ಕೆ ಐದು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ .