newsics.com
ಪಾಟ್ನ: ಮಗಳು ಅನ್ಯ ಜಾತಿಗೆ ಸೇರಿದ ಯುವಕನೊಬ್ಬನನ್ನು ಮದುವೆಯಾಗಿರುವುದಕ್ಕೆ ತಂದೆಯೇ ಆಕೆಯ ಹತ್ಯೆಗೆ ಸಂಚು ಹೂಡಿದ ಪ್ರಕರಣ ವರದಿಯಾಗಿದೆ.
ಈ ಸಂಬಂಧ ಮಾಜಿ ಶಾಸಕ ಸುರೇಂದ್ರ ಶರ್ಮಾ ಎಂಬವರನ್ನು ಬಂಧಿಸಲಾಗಿದೆ.
ಸುರೇಂದ್ರ ಶರ್ಮಾ ಅವರ ಮಗಳು ಇತ್ತೀಚೆಗೆ ಅನ್ಯ ಜಾತಿಗೆ ಸೇರಿದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಬಾಡಿಗೆ ಹಂತಕರ ನೆರವು ಪಡ಼ೆದು ಹತ್ಯೆಗೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.