Wednesday, November 30, 2022

ಕೊರೋನಾ ನೆಗೆಟಿವ್ ಬಂದರೂ ಪ್ರಾಣ ಕಳೆದುಕೊಂಡ ಶಾಸಕ

Follow Us

newsics.com

ಕೊಲ್ಕತ್ತಾ: ಕೊರೋನಾ ಸೋಂಕಿಗೆ ತುತ್ತಾಗಿ ಬಳಿಕ ಗುಣಮುಖರಾಗಿದ್ದ ಶಾಸಕರೊಬ್ಬರು ಇದೀಗ ಮೃತಪಟ್ಟಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಜಯಂತ್ ನಾಸ್ಕರ್ ಮೇ ತಿಂಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಬಳಿಕ ದೀರ್ಘಕಾಲದ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ವರದಿ ನೆಗೆಟಿವ್ ಬಂದಿತ್ತು  . ಈ ಖುಷಿಯಲ್ಲಿರುವಾಗಲೇ ಶಾಸಕ ಜಯಂತ್ ನಾಸ್ಕರ್ ಇದೀಗ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯರು ಶಾಸಕರ ಕೊರೋನಾ ವರದಿ ನೆಗೆಟಿವ್ ಬಂದಿರುವುದು ಸತ್ಯ. ಆದರೆ ಅವರ ಶ್ವಾಸ ಕೋಶಕ್ಕೆ ತೀವ್ರ ಹಾನಿಯಾಗಿತ್ತು. ಇದರಿಂದ ಅವರು ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಗೋಸಬಾ ಕ್ಷೇತ್ರದಿಂದ ಜಯಂತ್ ನಾಸ್ಕರ್ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದರು.

ಅತ್ಯಾಚಾರ ಆರೋಪ: ಮಾಜಿ ಸಚಿವ ಬೆಂಗಳೂರಿನಲ್ಲಿ ಸೆರೆ

ಮತ್ತಷ್ಟು ಸುದ್ದಿಗಳು

vertical

Latest News

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಸಿ ಪಾಳ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ನೇಪಾಳ ಮೂಲದ ಕೃಷ್ಣ ಕುಮಾರಿ ಎಂದು...
- Advertisement -
error: Content is protected !!