ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾ ರೂಢ ಶಿವಸೇನಾ ವಿರುದ್ದದ ವಾಗ್ದಾಳಿಯನ್ನು ರಾಜ್ ಠಾಕ್ರೆ ನೇತೃತ್ವದ ನವ ನಿರ್ಮಾಣ ಸೇನೆ ತೀವ್ರಗೊಳಿಸಿದೆ. ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಿವಾಸದ ಎದುರುಗಡೆ ಎಂ ಎನ್ ಎಸ್ ಬ್ಯಾನರ್ ಹಾಕಿದೆ. ಮೊದಲು ಈ ಕ್ಷೇತ್ರದಲ್ಲಿ ಅಂದರೆ ಬಾಂದ್ರ ವಿಧಾನಸಭಾ ದಲ್ಲಿರುವ ಅಕ್ರಮ ಬಾಂಗ್ಲಾ ಪ್ರಜೆಗಳನ್ನು ಹೊರದಬ್ಬಿ ಸಿ ಎಂ ಸಾಹೇಬರೆ ಎಂದು ಎಂ ಎನ್ ಎಸ್ ಸವಾಲು ಹಾಕಿದೆ. ಮಹಾರಾಷ್ಟ್ರದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ಪ್ರಜೆಗಳನ್ನು ಹೊರ ಕಳಿಸುವ ಸಂಬಂಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಮಹಾ ರಾಷ್ಟ್ರ ನವ ನಿರ್ಮಾಣ ಸೇನೆ ಈಗಾಗಲೇ ಎಚ್ಚರಿಕೆ ನೀಡಿದೆ.