ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ವೈದ್ಯರು, ಎಂಜಿನಿಯರ್ ಗಳು , ಐಟಿ ಪರಿಣಿತರು , ಶಿಕ್ಷಕರು ಹೀಗೆ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಐಶ್ವರ್ಯ ಶೆರೋನ್ ಕೂಡ ಒಬ್ಬರು.
ಐಶ್ವರ್ಯ ಇತರ ಅಭ್ಯರ್ಥಿಗಳಿಗಿಂತ ಭಿನ್ನವಾಗಿದ್ದಾರೆ. ಅವರು ದೇಶದ ಪ್ರಸಿದ್ದ ಮಾಡೆಲ್ ಗಳಲ್ಲಿ ಒಬ್ಬರಾಗಿದ್ದಾರೆ. ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದರು. ಸೈನಿಕ ಕುಟುಂಬದ ಹಿನ್ನೆಲೆ ಅವರಿಗಿದೆ. ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ಐಶ್ವರ್ಯ 93ನೇ rank ಪಡೆದಿದ್ದಾರೆ. ಇದೀಗ ಆಡಳಿತಕ್ಕೆ ಗ್ಲಾಮರ್ ಟಚ್ ನೀಡಲು ಸಿದ್ದತೆ ನಡೆಸಿದ್ದಾರೆ.