newsics.com
ಕೋಲ್ಕತ್ತಾದ ಪಟುಲಿ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ಮಾಡೆಲ್ ಶವವಾಗಿ ಪತ್ತೆಯಾಗಿದ್ದಾರೆ. ಇದು ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಡೆಲ್ ಬಿದಿಶಾ ಮಂಜುದಾರ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿ ಖಿನ್ನತೆಗೆ ಒಳಗಾಗಿದ್ದ ಮಂಜುಷಾ ನಿಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಂಜುಷಾ ತಾಯಿ ತಿಳಿಸಿದ್ದಾರೆ. ಬಿದಿಶಾ ಬುಧವಾರದಂದು ತನ್ನ ಬಾಡಿಗೆ ಫ್ಲಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು . ಈ ಪ್ರಕರಣಗಳು ಮಾತ್ರವಲ್ಲದೇ ಮೇ 15ರಂದು ಪಲ್ಲವಿ ಡೂಬೆ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.