ಗುಜರಾತ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭವ್ಯ ರಾಮಮಂದಿರಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿದ್ದನ್ನು ದೇಶವಾಸಿಗಳು ಸಡಗರ, ಸಂಭ್ರಮದಿಂದ ಟಿವಿ ಮೂಲಕ ನೋಡಿ ಖುಷಿಪಟ್ಟಿದ್ದಾರೆ. ಮೋದಿಯವರ ತಾಯಿ ಹೀರಾಬೆನ್ ಕೂಡ ತಮ್ಮ ಮನೆಯ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಿದ್ದಾರೆ.
ಶಿಲಾನ್ಯಾಸ, ಪೂಜೆ ನೆರವೇರಿಸಿದ್ದನ್ನು, ರಾಮಲಲ್ಲಾ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ್ದನ್ನೆಲ್ಲ ಗುಜರಾತ್ನ ಗಾಂಧಿನಗರದ ತಮ್ಮ ನಿವಾಸದಲ್ಲಿ ಕುಳಿತು ಟಿವಿಯಲ್ಲಿ ನೋಡಿದ ಹೀರಾಬೆನ್ ತಾವು ಕುಳಿತಲ್ಲಿಂದಲೇ ಕೈಮುಗಿದಿದ್ದಾರೆ. ಈ ಸನ್ನಿವೇಶದ ವಿಡಿಯೋ, ಫೋಟೋಗಳು ವೈರಲ್ ಆಗಿವೆ.
ತ್ಯಾಗ, ಬಲಿದಾನದಿಂದಾಗಿ ರಾಮ ಮಂದಿರ ಕನಸು ಸಾಕಾರಗೊಳ್ಳುತ್ತಿದೆ: ಮೋದಿ ಅಭಿಮತ