‘ಬೇಕಿದ್ದರೆ ನನ್ನ ಪ್ರತಿಕೃತಿಯನ್ನು ದಹಿಸಿ, ಸಾರ್ವಜನಿಕ ಆಸ್ತಿಯನ್ನಲ್ಲ’- ಇದು ಪೌರತ್ವ ತಿದ್ದಪಡಿ ಕಾಯ್ದೆಯ ವಿರುದ್ಧ ಪ್ರತಿಭಟನಾ ನಿರತರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಂದೇಶ.
ದೆಹಲಿಯಲ್ಲಿ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ದೇಶದಲ್ಲಿ ಅನವಶ್ಯಕ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಮೋದಿ, ಪ್ರತಿಯೊಬ್ಬರೂ ಸಂಸತ್ತನ್ನು ಗೌರವಿಸಬೇಕು. ಬೇಕಿದ್ದರೆ ಮೋದಿಯನ್ನು ದ್ವೇಷಿಸಿ, ದೇಶವನ್ನಲ್ಲ. ಕೆಲ ವಿಪಕ್ಷ ನಾಯಕರು ವಿದೇಶಗಳಲ್ಲಿ ದೇಶದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.