ತಿರುಚನಾಪಳ್ಳಿ: ಪ್ರಧಾನಿ ಮೋದಿಯವರ ಆಡಳಿತ ಹಾಗೂ ವ್ಯಕ್ತಿತ್ವಕ್ಕೆ ಮನಸೋತ ತಮಿಳುನಾಡಿನ ರೈತರೊಬ್ಬರು ತಮ್ಮ ಜಮೀನಿನಲ್ಲಿಯೇ ಮೋದಿ ದೇಗುಲ ನಿರ್ಮಿಸಿ ನಿತ್ಯ ಪೂಜೆ ಮಾಡುತ್ತಿದ್ದಾರೆ.
ತಿರುಚುನಾಪಳ್ಳಿಯಿಂದ 63 ಕಿ.ಮೀ. ದೂರದಲ್ಲಿರುವ ಎರಕುಡಿಯ ಪಿ.ಶಂಕರ್ ಅವರೇ ಮೋದಿಯವರ ದೇಗುಲ ನಿರ್ಮಿಸಿದವರು. 16 ಚದರ ಅಡಿ ಜಾಗದಲ್ಲಿ 1.2 ಲಕ್ಷ ರೂ. ವೆಚ್ಚದಲ್ಲಿ ದೇಗುಲ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ 2,000 ರೂ. ಹಾಗೂ ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಅನಿಲ ಸಂಪರ್ಕ ಮತ್ತು ಶೌಚಗೃಹವನ್ನು ನಿರ್ಮಿಸಿಕೊಂಡಿದ್ದೇನೆ ಎನ್ನುತ್ತಾರೆ ಶಂಕರ್.
ಈ ದೇವಸ್ಥಾನದಲ್ಲಿ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ, ಪ್ರಸ್ತುತ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಪೋಟೋಗಳನ್ನೂ ಇಟ್ಟಿದ್ದಾರೆ.
ಶಂಕರ್, ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಡಿದ್ದು ಕೆಲ ವರ್ಷಗಳ ಹಿಂದೆ ಸ್ವದೇಶಕ್ಕೆ ಹಿಂತಿರುಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ರೈತನಿಂದ ಮೋದಿ ದೇಗುಲ ನಿರ್ಮಾಣ
Follow Us