ದೆಹಲಿ: ಓಂ ಶಾಂತಿ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪೇಜಾವರ ಶ್ರೀಗಳ ದೇಹಾಂತ್ಯಕ್ಕೆ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಅವರು, ವಿಶ್ವೇಶತೀರ್ಥ ಸ್ವಾಮೀಜಿಯವರು ಮಾರ್ಗದರ್ಶಿ ಬೆಳಕಾಗಿ ಲಕ್ಷಾಂತರ ಜನರ ಮನದಲ್ಲಿ ಹಾಗೂ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸೇವೆ ಮತ್ತು ಆಧ್ಯಾತ್ಮಿಕತೆಯ ಶಕ್ತಿಶಾಲಿಯಾಗಿರುವ ಅವರು ಹೆಚ್ಚು ನ್ಯಾಯಯುತ ಮತ್ತು ಸಹಾನುಭೂತಿಯ ಸಮಾಜಕ್ಕಾಗಿ ನಿರಂತರವಾಗಿ ಕೆಲಸ ಮಾಡಿದರು. ಸ್ವಾಮೀಜಿ ಅವರಿಂದ ಕಲಿಯುವ ಅವಕಾಶ ಸಿಕ್ಕಿದ್ದು ನನಗೆ ದೊರೆತ ಆಶೀರ್ವಾದ ಎಂದು ನಾನು ಪರಿಗಣಿಸಿದ್ದೇನೆ. ಗುರುಪೂರ್ಣಿಮೆಯಂದು ಅವರನ್ನು ಭೇಟಿ ಮಾಡಿದ ಕ್ಷಣ ಜೀವನದ ಉದ್ದಕ್ಕೂ ನೆನಪಿಡುವಂತಹದ್ದು. ಅವರ ಅಗಾಧವಾದ ಜ್ಞಾನವು ಯಾವಾಗಲೂ ಎದ್ದು ಕಾಣುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪೇಜಾವರ ಶ್ರೀ ಮಾರ್ಗದರ್ಶಿ ಬೆಳಕು: ಮೋದಿ ಸಂತಾಪ
Follow Us