newsics.com
ನಾಗಪುರ್(ಮಹಾರಾಷ್ಟ್ರ): ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರಗೊಳ್ಳುತ್ತಿರುವ ವಿಷಯಗಳು ದೇಶಕ್ಕೆ ಮಾರಕವಾಗಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕೊರೋನಾ ಲಾಕ್ಡೌನ್ ನಂತರ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ನಂತಹ ಓಟಿಟಿ ಪ್ಲಾಟ್ಫಾರ್ಮ್ಸ್ಗಳ ಬಳಕೆ ಹೆಚ್ಚಾಗಿದ್ದು, ಇವುಗಳಲ್ಲಿ ದೇಶಕ್ಕೆ ಅಪಾಯ ತಂದೊಡ್ಡಬಹುದಾದ ವಿಚಾರಗಳು ಪ್ರಸಾರವಾಗುತ್ತಿವೆ ಎಂದರು.
ಮಹಾರಾಷ್ಟ್ರದ ನಾಗಪುರದಲ್ಲಿ ವಿಜಯದಶಮಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಕೊರೋನಾ ಆರಂಭವಾದಾಗಿನಿಂದ ಬಹುತೇಕ ಮಕ್ಕಳ ಬಳಿಯೂ ಮೊಬೈಲ್ ಫೋನ್ಗಳಿವೆ. ಅವರು ಮೊಬೈಲ್ಗಳಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದು ನಿಯಂತ್ರಣದಲ್ಲಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಭಾರತದಲ್ಲಿ ಮಾದಕವಸ್ತು ಸೇವನೆಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ ಎಂದ ಅವರು, ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳು ಇಂತಹ ಕೃತ್ಯಗಳನ್ನು ಪ್ರಚೋದಿಸುತ್ತಿವೆ, ಇದರಿಂದ ಗಳಿಸಿದ ಹಣವನ್ನು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಬಿಟ್ ಕಾಯಿನ್ನಂತಹ ಗುಪ್ತ ಹಾಗೂ ನಿಯಂತ್ರಣದಲ್ಲಿರದ ಹಣ ಎಲ್ಲ ದೇಶಗಳಿಗೂ ಮಾರಕ ಎಂದ ಅವರು, ದೇಶಗಳ ಅರ್ಥವ್ಯವಸ್ಥೆಯನ್ನು ಹದಗೆಡಿಸುವ ಸಾಮರ್ಥ್ಯವನ್ನು ಹೊಂದಿವೆ. ಸರ್ಕಾರ ಇಂತಹ ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಭಾಗವತ್ ಆಗ್ರಹಿಸಿದರು.
ಜೆಇಇ ಅಡ್ವಾನ್ಸ್ಡ್ ಪರೀಕ್ಷಾ ಫಲಿತಾಂಶ ಪ್ರಕಟ: ಮೃದುಲ್ ಅಗರ್ವಾಲ್ ಫಸ್ಟ್ ರಾಂಕ್