* ನಿರ್ಭಯಾ ಕೇಸ್ ಅಪರಾಧಿಗಳನ್ನು ನೇಣಿಗೇರಿಸುವ ಪವನ್ ಜಲ್ಲಾದ್ ಹೇಳಿಕೆ
ಮೇರಠ್: ‘ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಒದಗಿಸಿದ ಅವಕಾಶ.’
– ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಹೊಣೆ ಹೊತ್ತಿರುವ ಉತ್ತರ ಪ್ರದೇಶ ಮೇರಠ್ ನ ಪವನ್ ಜಲ್ಲಾದ್ (57) ಹೇಳಿದ ಮಾತಿದು.
ಮಗಳ ಮದುವೆಗೆ ಹಣ ಹೊಂದಿಸುವುದು ಹೇಗೆಂದು ತಿಳಿಯದೆ ಕಂಗಾಲಾಗಿದ್ದೆ. ಮನೆಯೂ ಕುಸಿಯುವ ಹಂತದಲ್ಲಿದೆ. ಸಾಲದ್ದಕ್ಕೆ ಆಗಾಗ ಸಾಲಗಾರರೂ ಮನೆ ಬಳಿ ಬರುತ್ತಿದ್ದಾರೆ. ಈ ವೇಳೆಯಲ್ಲೇ ಉತ್ತರ ಪ್ರದೇಶ ಸರ್ಕಾರ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ನೇಣಿಗೇರಿಸುವ ಕೆಲಸವನ್ನು ನನಗೆ ವಹಿಸಿದೆ. ಇದಕ್ಕಾಗಿ ಸರ್ಕಾರ ನನಗೆ ಒಂದು ಲಕ್ಷ ರೂಪಾಯಿ ನೀಡುತ್ತಿದ್ದು, ಈ ಹಣದಲ್ಲಿ ಮಗಳ ಮದುವೆ ಮಾಡುವುದಾಗಿ ಪವನ್ ಹೇಳಿದ್ದಾನೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜ.22ರಂದು ಗಲ್ಲಿಗೇರಿಸುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಪವನ್ ಜಲ್ಲಾದ್ ಗೆ ಅಪರಾಧಿಗಳನ್ನು ನೇಣಿಗೇರಿಸುವ ಜವಾಬ್ದಾರಿ ನೀಡಿದೆ.
ನಾನು ಆ ದಿನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅದಕ್ಕೂ ಮೊದಲೇ ಅಪರಾಧಿಗಳನ್ನು ಗಲ್ಲಿಗೇರಿಸಬಹುದು. ಮಾಹಿತಿ ಕೊಡವುದಾಗಿ ಪೊಲೀಸರು ತಿಳಿಸಿದ್ದಾರೆಂದು ಪವನ್ ಹೇಳಿದ್ದಾರೆ.
ಪವನ್ ಜಲ್ಲಾದ್, ಮೇರಠ್ನ ಭೂಮಿಯಪುಲ್ಲಾ ಪ್ರದೇಶದ ಲಕ್ಷ್ಮಣ ಕುಮಾರ್ ಕುಟುಂಬದ ನಾಲ್ಕನೇ ತಲೆಮಾರಿನ ವ್ಯಕ್ತಿ. ಈ ಕುಟುಂಬದವರು ಹ್ಯಾಂಗ್ಮನ್ ಕೆಲಸ ಮಾಡುತ್ತ ಬಂದಿದ್ದಾರೆ.