newsics.com
ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಭೇಟಿಗೆ ನಿರ್ಬಂಧಿಸಿದ್ದ ಐತಿಹಾಸಿಕ ಸ್ಮಾರಕಗಳನ್ನು ತೆರೆಯಲು ಪುರಾತತ್ವ ಇಲಾಖೆ ನಿರ್ಧರಿಸಿದೆ.
ಜೂ. 16ರಿಂದ ತಾಜ್ ಮಹಲ್ ಸೇರಿದಂತೆ ಇತರ ಸಂರಕ್ಷಿತ ಸ್ಮಾರಕಗಳನ್ನು ಸಾರ್ವಜನಿಕರ ಭೇಟಿಗೆ ತೆರೆಯಲಾಗುತ್ತಿದೆ.
ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಮುನ್ನ ಆನ್’ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಆಫ್’ಲೈನ್ ಸೌಲಭ್ಯವಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ.