newsics.com
ನವದೆಹಲಿ: ವಿಪ್ರೊ ಕಂಪನಿಯಲ್ಲಿದ್ದುಕೊಂಡೇ ಪ್ರತಿಸ್ಪರ್ಧಿ ಕಂಪನಿಗೂ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಿಪ್ರೋ ವಜಾ ಮಾಡಿದೆ.
ವಿಪ್ರೊ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಈ ಮಾಹಿತಿ ನೀಡಿದ್ದಾರೆ. ಐ.ಟಿ. ಉದ್ಯೋಗಿಗಳು ಒಂದು ಕಂಪನಿಗೆ ಕೆಲಸ ಮಾಡುತ್ತಲೇ ಇನ್ನೊಂದು ಕಂಪನಿಗೂ ಕೆಲಸ ಮಾಡಿಕೊಡುವ ಪ್ರವೃತ್ತಿಯನ್ನು (ಮೂನ್‌ಲೈಟಿಂಗ್) ಪ್ರೇಮ್‌ಜಿ ಅವರು ಈ ಹಿಂದೆ ಕಟುವಾಗಿ ಟೀಕಿಸಿದ್ದರು.
ವಿಪ್ರೊದಲ್ಲಿ ಕೆಲಸ ಮಾಡುತ್ತಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡುವವರಿಗೆ ನಮ್ಮ ಕಂಪನಿಯಲ್ಲಿ ಸ್ಥಾನ ಇಲ್ಲ ಎಂದು ಪ್ರೇಮ್‌ಜಿ ಬುಧವಾರ ಪುನರುಚ್ಚರಿಸಿದ್ದಾರೆ.
ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ತನ್ನ ನೌಕರರಿಗೆ ಈಚೆಗೆ, ಮೂನ್‌ಲೈಟಿಂಗ್‌ಗೆ ಅವಕಾಶ ಇಲ್ಲ ಎಂದು ಇ–ಮೇಲ್ ಮೂಲಕ ತಿಳಿಸಿತ್ತು. ಐಬಿಎಂ ಸೇರಿದಂತೆ ಬಹುತೇಕ ಐಟಿ ಕಂಪನಿಗಳು ಮೂನ್ ಲೈಟಿಂಗ್ ಪ್ರವೃತ್ತಿಯನ್ನು ವಿರೋಧಿಸಿವೆ. ಹೀಗಾಗಿ ಎರಡು ಕಂಪನಿಗಳಿಗೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ದೈಹಿಕ ಸಂಬಂಧದ ಬಳಿಕ ಮದುವೆ ನಿರಾಕರಿಸಿದ ಪ್ರಿಯಕರನ ಕೊಚ್ಚಿ ಕೊಂದ ಪ್ರಿಯತಮೆ