Wednesday, May 25, 2022

100ನೇ ಗೆಲುವಿನ ದಾಖಲೆ ಬರೆದ ಎಂಎಸ್ ಧೋನಿ

Follow Us

newsics.com
ಅಬುದಾಬಿ: ಚೆನ್ನೈ ಸೂಪರ್ ಕಿಂಗ್ಸ್‌ ನಾಯಕನಾಗಿ ಎಂಎಸ್ ಧೋನಿ 100ನೇ ಗೆಲುವಿನ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. 14 ತಿಂಗಳ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಶನಿವಾರ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಧೋನಿಯವರ ಈ ಸಾಧನೆಗೆ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂ ಸಾಕ್ಷಿಯಾಯಿತು. ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಜಯ ಗಳಿಸಿತು. ಸಿಎಸ್‌ಕೆ ಗೆಲುವಿನಲ್ಲಿ ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 162 ರನ್ ಗುರಿ ನೀಡಿತು. ಈ
ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಫಾಫ್ ಡು ಪ್ಲೆಸಿಸ್ 58 (44 ಎಸೆತ), ಅಂಬಾಟಿ ರಾಯುಡು 71 (48 ಎಸೆತ), ರವೀಂದ್ರ ಜಡೇಜಾ 10, ಸ್ಯಾಮ್ ಕರನ್ 18 ರನ್ ಕೊಡುಗೆಯೊಂದಿಗೆ 19.2 ಓವರ್‌ಗೆ 5 ವಿಕೆಟ್ ಕಳೆದು 166 ರನ್ ಗಳಿಸುವುದರೊಂದಿಗೆ ವಿಜಯ ಸಾಧಿಸಿತು.

ಮತ್ತಷ್ಟು ಸುದ್ದಿಗಳು

Latest News

ಮಳಲಿ ಮಸೀದಿಯಲ್ಲಿ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆಗೆ ಕ್ಷಣಗಣನೆ

newsics.com ಮಂಗಳೂರು ಹೊರವಲಯದಲ್ಲಿರುವ ಗಂಜಿಮಠ ಸಮೀಪದಲ್ಲಿರುವ ಮಳಲಿ ಮಸೀದಿ ನವೀಕರಣ ಕಾರ್ಯದ ವೇಳೆಯಲ್ಲಿ ಹಿಂದೂ ದೇವಾಲಯದ ಕುರುಹುಗಳು ಪತ್ತೆಯಾದ ಸಂಬಂಧ ಇಂದು ಬಜರಂಗದಳ ಹಾಗೂ ವಿಶ್ವ ಹಿಂದೂ...

ಬಿಹಾರ ರಾಜ್ಯಸಭೆಗೆ ಅವಿರೋಧ ಆಯ್ಕೆಯಾದ ಕನ್ನಡಿಗ

newsics.com ಬಿಹಾರ ರಾಜ್ಯಸಭೆಗೆ ಉಡುಪಿ ತಾಲೂಕಿನ ಸಳ್ವಾಡಿ ಮೂಲದ ಅನಿಲ್​ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಡಾ. ಮಹೇಂದ್ರ ಪ್ರಸಾದ್​ ನಿಧನದ ಬಳಿಕ ತೆರವಾಗಿದ್ದ ಈ ಸ್ಥಾನಕ್ಕೆ ಅನಿಲ್​ ಹೆಗ್ಡೆ ಹೆಸರನ್ನು ಬಿಹಾರ ಸಿಎಂ ನಿತೀಶ್​ ಕುಮಾರ್...

ನಿರೂಪಕಿಯರು​ ಮುಖ ಮುಚ್ಚಿಕೊಳ್ಳಿ ಎಂದ ತಾಲಿಬಾನ್​ ವಿರುದ್ಧ ಫೇಸ್​ಮಾಸ್ಕ್​ ಅಭಿಯಾನ!

newsics.com ಮಹಿಳಾ ನಿರೂಪಕರಿಗೆ ಕೆಲಸದ ಸ್ಥಳದಲ್ಲಿ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು ಎಂದು ತಾಲಿಬಾನ್​ ಹೊರಡಿಸಿರುವ ಆದೇಶವನ್ನು ವಿರೋಧಿಸಿರುವ ಅಫ್ಘಾನಿಸ್ತಾನದ ಪುರುಷ ಸುದ್ದಿ ವಾಚಕರು ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನದ ಭಾಗವಾಗಿ ಪುರುಷ ನಿರೂಪಕರು...
- Advertisement -
error: Content is protected !!