newsics.com
ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯನ್ನು ಭೇಟಿಯಾಗಲು ಅಭಿಮಾನಿಯೋರ್ವ ಹರಿಯಾಣದ ಹಿಸಾರ್‌ನಿಂದ ರಾಂಚಿಗೆ ನಡೆದುಕೊಂಡು ಬಂದಿದ್ದಾನೆ.
ತನ್ನ ನೆಚ್ಚಿನ ತಾರೆಯನ್ನು ಭೇಟಿಯಾಗಲು ಬರೋಬ್ಬರಿ 1,400ಕಿಮೀ ಕಾಲ್ನಡಿಗೆಯಲ್ಲಿ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
18 ವರ್ಷದ ಅಜಯ್ ಗಿಲಾಲ್ ಎನ್ನುವ ಬಾಲಕ ರಾಂಚಿಗೆ ಬಂದಿದ್ದು, 10 ನಿಮಿಷವಾದರೂ ಧೋನಿಯವರನ್ನು ಭೇಟಿಯಾಗಬೇಕು ಎನ್ನುವ ಆಸೆ ಇದೆ ಎಂದಿದ್ದಾನೆ. ಆದರೆ ಧೋನಿ ಐಪಿಎಲ್ ಗಾಗಿ ಯುಎಇಗೆ ತೆರಳಿದ್ದರು.
ಹೀಗಾಗಿ ಮನೆಗೆ ತೆರಳುವಂತೆ ಹೇಳಿದರೂ ಒಪ್ಪದೆ ಕಾಯುತ್ತೇನೆ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ. ಈ ಕುರಿತು ಟೆಲಿಗ್ರಾಫ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಂ ಎಸ್ ಧೋನಿ ಭೇಟಿಯಾಗಲು 1,400 ಕಿಮೀ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿ
Follow Us