newsics.com
ಮುಂಬೈ: ಕೊರೋನಾ ಸಮಯದಲ್ಲಿ ಎಲ್ಲರೂ ಸಂಕಷ್ಟದಲ್ಲಿದ್ದರೆ, ಉದ್ಯಮಿ ಮುಖೇಶ್ ಅಂಬಾನಿ ಕಳೆದ 6 ತಿಂಗಳಿಂದ ಪ್ರತಿ ಗಂಟೆಗೆ 90 ಕೋಟಿ ರೂ. ಗಳಿಸುತ್ತಿದ್ದಾರಂತೆ.
ಕೊರೋನಾ ತಂದೊಡ್ಡಿದ ಸಮಸ್ಯೆಗಳ ಕಾರಣದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿರುವ ಸಮಯದಲ್ಲಿ ಈ ಮಾಹಿತಿ ಹೆಚ್ಚು ಅಚ್ಚರಿ ತರಿಸಿದೆ.
ಹುರುನ್ ಇಂಡಿಯಾ ಮತ್ತು ಐಐಎಓಎಲ್ ವೆಲ್ತ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಈ ಮಾಹಿತಿ ನೀಡಿದೆ. ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್-2020ರ ಒಂಬತ್ತನೇ ಲಿಸ್ಟ್ ಬಿಡುಗಡೆಯಾಗಿಗಿದ್ದು, 2020ರ ಆಗಸ್ಟ್ 31ರ ವೇಳೆಗೆ 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಭಾರತದ ಶ್ರೀಮಂತ ಜನರು ಈ ಪಟ್ಟಿಗೆ ಸೇರುತ್ತಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 9ನೇ ವರ್ಷವೂ ಅಗ್ರ ಸ್ಥಾನದಲ್ಲಿದ್ದಾರೆ. ಮುಖೇಶ್ ಅಂಬಾನಿಯ ಒಟ್ಟು ಆದಾಯ 6,58,400 ಕೋಟಿ ರೂಪಾಯಿ. ಕಳೆದ 12 ತಿಂಗಳಲ್ಲಿ ಅವರ ಒಟ್ಟು ಸಂಪತ್ತು ಶೇ. 73ರಷ್ಟು ವೃದ್ಧಿಯಾಗಿದೆಯಂತೆ. ಈ ವರದಿಯಲ್ಲಿ 828 ಭಾರತೀಯರು ಸೇರಿದ್ದಾರೆ. 63 ವರ್ಷದ ಅಂಬಾನಿ ಲಾಕ್ಡೌನ್ ಸಮಯದಲ್ಲಿ ಅಂದರೆ, ಮಾರ್ಚ್ನಿಂದ ಆಗಸ್ಟ್ ವರೆಗೆ ಪ್ರತಿ ಗಂಟೆಗೆ 90 ಕೋಟಿ ರೂ. ಗಳಿಸಿದ್ದಾರೆ. ಪ್ರಸ್ತುತ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಲಂಡನ್ ಮೂಲದ ಹಿಂದುಜಾ ಸಹೋದರರು (ಎಸ್ಪಿ ಹಿಂದೂಜಾ, ಅವರ ಮೂವರು ಸಹೋದರರು) 1,43,700 ಕೋಟಿ ರೂ. ಆಸ್ತಿಯೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಅವರ ಒಟ್ಟು ಆಸ್ತಿ 1,43,700 ಕೋಟಿ ಎಂದು ಹೇಳಲಾಗಿದೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಎಚ್ಸಿಎಲ್ ಸಂಸ್ಥಾಪಕ ಶಿವ ನಾಡರ್ ಇದ್ದು, ಅವರ ಆಸ್ತಿ 1,41,700 ಕೋಟಿ ರೂ.ಗಳು. ನಂತರದ ಸ್ಥಾನಗಳಲ್ಲಿ ಗೌತಮ್ ಅದಾನಿ ಮತ್ತು ಕುಟುಂಬ ನಾಲ್ಕನೇ ಸ್ಥಾನ ಮತ್ತು ಅಜೀಮ್ ಪ್ರೇಮ್ಜಿ 5ನೇ ಸ್ಥಾನದಲ್ಲಿದ್ದಾರೆ.
ಅವೆನ್ಯೂ ಸೂಪರ್ ಮಾರ್ಟ್ಗಳ ಸಂಸ್ಥಾಪಕ ರಾಧಾಕಿಶನ್ ದಮಾನಿ 2020ರ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಎಸ್. ಪೂನವಾಲಾ, ಕೊಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೊಟಕ್, ಸನ್ ಫಾರ್ಮಾದ ದಿಲೀಪ್ ಶಾಂಘ್ವಿ ಮತ್ತು ಪಾಲ್ಲೊಂಜಿ ಗುಂಪಿನ ಸೈರಸ್ ಪಾಲೂಂಜಿ ಮಿಸ್ತ್ರಿ ಮತ್ತು ಶಪೂರ್ಜಿ ಪಲೋಂಜಿ ಮಿಸ್ತ್ರಿ ಇದ್ದಾರೆ.
ಕೊರೋನಾ ವೇಳೆ ಅಂಬಾನಿ ಗಳಿಕೆ ಪ್ರತಿ ಗಂಟೆಗೆ 90 ಕೋಟಿ!
Follow Us