ಮುಂಬೈ: ಜಗಜ್ಯೋತಿ ಕಲಾವೃಂದ ಕೊಡಮಾಡುವ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಪುರಸ್ಕಾರಕ್ಕೆ ದಾಂಡೇಲಿಯ ನಾಗರೇಖಾ ಪಿ. ಗಾಂವ್ಕರ್ ಹಾಗೂ ಕಾವ್ಯ ಪುರಸ್ಕಾರಕ್ಕೆ ದಾವಣಗೆರೆಯ ಮಂಜುಳಾ ಹಿರೇಮಠ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 12ರಂದು ಪಶ್ಚಿಮ ಡೊಂಬಿವಿಲಿಯ ಜ್ಞಾನೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ.
ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಮಂಜುಳಾ ಹಿರೇಮಠ ಅವರ `ಗಾಯಗೊಂಡವರಿಗೆ’ ಕವನ ಸಂಕಲನ ಹಾಗೂ ನಾಗರೇಖಾ ಗಾಂವ್ಕರ್ ಅವರ `ಮೌನದೊಳಗೊಂದು ಅಂತರ್ಧಾನ’ ಕಥಾಸಂಕಲನ ಪ್ರಶಸ್ತಿಗೆ ಭಾಜನವಾಗಿವೆ.
ಕನ್ನಡಿಗರಿಬ್ಬರಿಗೆ ಮುಂಬೈ ಸಾಹಿತ್ಯ ಪುರಸ್ಕಾರ
Follow Us