newsics.com
ಶಾರ್ಜಾ: ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಕನಸು ಜೀವಂತವಾಗಿದೆ. ನಥನ್ ಕೌಂಟರ್ ನೈಲ್, ಜೇಮ್ಸ್ ನೀಶನ್, ಬುಮ್ರಾ ಬೌಲಿಂಗ್ಗೆ ತತ್ತರಿಸಿದ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತು. ಮುಂಬೈ 8.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಹೊಡೆದು ಜಯ ಸಾಧಿಸಿತು.
13 ಪಂದ್ಯಗಳಿಂದ 12 ಅಂಕ ಪಡೆದಿರುವ ಮುಂಬೈ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ರಾಜಸ್ಥಾನ 10 ಅಂಕದೊಂದಿಗೆ 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಇಳಿದಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಮೊದಲ ವಿಕೆಟಿಗೆ 27 ರನ್ ಗಳಿಸಿತ್ತು. ನಂತರ 8 ವಿಕೆಟ್ಗಳು 55 ರನ್ ಅಂತರದಲ್ಲಿ ಸೋಲನ್ನನುಭವಿಸಿತು.
ಕೌಂಟರ್ ನೈಲ್ 14 ರನ್ ನೀಡಿ 4 ವಿಕೆಟ್ ಪಡೆದರೆ, ಜೇಮ್ಸ್ ನಿಶಮ್ 3, ಬುಮ್ರಾ 2 ವಿಕೆಟ್ ಪಡೆದರು. ಮುಂಬೈ ಪರ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿದರು. 13 ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿಯೊಂದಿಗೆ 22 ರನ್ ಗಳಿಸಿ ಔಟಾದರು. ಈಶನ್ ಕಿಶನ್ ಔಟಾಗದೇ 50 ರನ್(25 ಎಸೆತ, 5 ಬೌಂಡರಿ, 3 ಸಿಕ್ಸರ್) ಸಂಪಾದಿಸಿದರು.