ಮುಂಬೈ: ಘಾಟ್ಕೋಪರ್ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯೊಂದು ಹೊತ್ತಿ ಉರಿಯುತ್ತಿದೆ.
ಇದರಿಂದ ಸುತ್ತಲೂ ದಟ್ಟ ಹೊಗೆ ಆವರಿಸಿದ್ದು, ಕೈರಾನಿ ರಸ್ತೆ ಸೇರಿ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.
15 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಘಾಟ್ಕೋಪರ್ ಪ್ರದೇಶ ಬಳಿಯ ಅಸಲ್ಫಾ ಎಂಬ ಗ್ರಾಮದಲ್ಲಿ ಈ ಕಾರ್ಖಾನೆಯಿದೆ.
ಈ ಅಗ್ನಿ ಅನಾಹುತದಿಂದ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿಲ್ಲ. ಈವರೆಗೆ ವಿಮಾನ ನಿಲ್ದಾಣದಿಂದ ತೆರಳುವ ಮತ್ತು ಆಗಮಿಸುವ ಪ್ರಕ್ರಿಯೆಗೆ ತಡೆಯಾಗಿಲ್ಲ ಎಂದು ಮುಂಬೈ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಕೆಮಿಕಲ್ ಕಾರ್ಖಾನೆಗೆ ಬೆಂಕಿ, ಟ್ರಾಫಿಕ್ ಜಾಮ್
Follow Us