newsics.com
ಅಬುಧಾಬಿ: ಐಪಿಎಲ್ ಟೂರ್ನಿಯ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ ನೈಟ್ ರೈಡರ್ಸ್ ವಿರುದ್ಧ 49 ರನ್ಗಳ ಗೆಲುವು ಸಾಧಿಸಿದೆ.
ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 196 ರನ್ಗಳ ಗುರಿ ಬೆನ್ನತ್ತಿದ ಕೋಲ್ಕತ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮಾನ್ ಗಿಲ್ (7) ಹಾಗೂ ಸುನೀಲ್ ನರೇನ್ (9) ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ತಂಡವು 25 ರನ್ಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದಿನೇಶ್ ಕಾರ್ತಿಕ್ (30), ನಿತೀಶ್ ರಾಣ (24) ಜತೆಗೂಡಿ ತಂಡಕ್ಕೆ ಚೇತರಿಕೆ ತಂದುಕೊಟ್ಟರೂ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಆಘಾತ ನೀಡಿದರು. ಕೇವಲ 77 ರನ್ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಕೋಲ್ಕತ ಗೆಲುವಿನ ಆಸೆ ಕೈಬಿಟ್ಟಿತು. ಆಂಡ್ರೆ ರಸೆಲ್ (11), ಇಯಾನ್ ಮಾರ್ಗನ್ (16) ಮತ್ತು ನಿಖಿಲ್ ನಾಯಕ್ (1) ಔಟಾಗಿದ್ದು, ಕೋಲ್ಕತ ಸೋಲಿಗೆ ಕಾರಣವಾಯಿತು.
ಕೋಲ್ಕತ ವಿರುದ್ಧ ಮುಂಬೈ ಇಂಡಿಯನ್ಸ್’ಗೆ ಗೆಲುವು
Follow Us