ಮುಂಬೈ: ಮುಂಬೈ ನಗರದಲ್ಲಿ ಭಾನುವಾರ ಆಯೋಜಿಸಿಲಾಗಿದ್ದ 2020 ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ 64 ವರ್ಷದ ವಯಸ್ಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಗಜೇಂದ್ರ ಮಾಜಾಲ್ಕರ್ 2018ರ ಮ್ಯಾರಥಾನ್ ನಲ್ಲೂ ಪಾಲ್ಗೊಂಡಿದ್ದರು.
ಓಟದ ನಡುವೆ ಎದೆನೋವಿನಿಂದ ರಸ್ತೆ ಬದಿಯಲ್ಲಿ ಕುಳಿತಿದ್ದ ಇವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ಇದೇ ಓಟದಲ್ಲಿ ಇಬ್ಬರು ವ್ಯಕ್ತಿಗಳು ಅಸ್ವಸ್ಥರಾಗಿದ್ದು, ಈಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.