newsics.com
ಮುಂಬೈ: ವಿಲಾಸಿ ಹಡಗಿನಲ್ಲಿ ರೇವ್ ಪಾರ್ಟಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳಿಗೆ ಹೊಸ ತಲೆ ನೋವು ಆರಂಭವಾಗಿದೆ.
ಎನ್ ಸಿ ಬಿ ತನಿಖಾಧಿಕಾರಿಗಳು ಎಲ್ಲಿಗೆ ಭೇಟಿ ಕೊಡುತ್ತಾರೆ ಯಾರ ಬಗ್ಗೆ ತನಿಖೆ ನಡೆಸುತ್ತಾರೆ ಎಂಬ ಬಗ್ಗೆ ಮುಂಬೈ ಪೊಲೀಸರು ಅವರನ್ನು ಹಿಂಬಾಲಿಸುತ್ತಿದ್ದಾರೆ. ಈ ಸಂಬಂಧ ಎನ್ ಸಿ ಬಿ ಹಿರಿಯ ಅಧಿಕಾರಿಗಳು ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಹಿಂಬಾಲಿಸಿಕೊಂಡು ಬರುವುದರಿಂದ ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ಎನ್ ಸಿ ಬಿ ಅಧಿಕಾರಿಗಳು ದೂರಿದ್ದಾರೆ.
ಶಾರುಖ್ ಖಾನ್ ಮಗ ಆರ್ಯನ್ ಖಾನ್ ಸೇರಿದಂತೆ ಇದುವರೆಗೆ 20 ಮಂದಿಯನ್ನು ಈ ಸಂಬಂಧ ಬಂಧಿಸಲಾಗಿದೆ.