newsics.com
ಮುಂಬೈ: ವಿಲಾಸಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವಿದೇಶಿ ಪ್ರಜೆಯನ್ನು ಎನ್ ಸಿ ಬಿ ಬಂಧಿಸಿದೆ. ಇದರೊಂದಿಗೆ ಬಂಧಿತ ವಿದೇಶಿಯರ ಸಂಖ್ಯೆ ಎರಡಕ್ಕೆ ಏರಿದೆ.
ಗೋರೆಗಾಂವ್ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಸಿ ಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿ ರೇವ್ ಪಾರ್ಟಿಯ ಪ್ರಮುಖ ಕೊಂಡಿ ಎಂದು ಎನ್ ಸಿ ಬಿ ಅಧಿಕಾರಿಗಳು ತಿಳಿಸಿದ್ದಾರೆ.