- ಜ.11 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ಮುಂಬೈ: ಇಲ್ಲಿನ ಕನ್ನಡ ಭವನ ಎಜುಕೇಷನ್ ಸೊಸೈಟಿ ಆಯೋಜಿಸಿದ್ದ ಅಖಿಲ ಭಾರತ ಕಥಾ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆ ಸೊರಬದ ಡಾ.ಅಜಿತ್ ಎಸ್. ಹರೀಶಿ ಅವರ `ಕನ್ನಡಿಗಂಟಿದ ಬಿಂದಿ’ ಪ್ರಥಮ ಸ್ಥಾನ ಪಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ದೊಡ್ಡಬೊಮ್ಮನಹಳ್ಳಿಯ ಸದಾಶಿವ ಸೊರಟೂರು ಅವರ ‘ನೀಲಿ’ ಕತೆಗೆ ದ್ವಿತೀಯ ಬಹುಮಾನ ಹಾಗೂ ಮುಂಬೈನ ಡಾ.ಕೊಳ್ಳಪ್ಪೆ ಗೋವಿಂದ ಭಟ್ ಅವರ `ಶಿಲ್ಪ ಸಹವಾಸ’ ಕತೆಗೆ ತೃತೀಯ ಬಹುಮಾನ ಲಭಿಸಿದೆ.
ಮಂಗಳೂರಿನ ದಿನಕರ ನಾಯಕ್ ಅವರ ‘ಒಂದು ಸಾವಿನ ವರದಿ’, ದಾಂಡೇಲಿಯ ನಾಗರೇಖಾ ಗಾಂವಕರ್ ಅವರ ‘ಪ್ರೀತಿಯ ಹೊಸ ಭಾಷ್ಯ’ ಕತೆಗಳು ಪ್ರೋತ್ಸಾಹಕ ಬಹುಮಾನಕ್ಕೆ ಭಾಜನವಾಗಿವೆ. ಬೆಂಗಳೂರಿನ ವಸುಂಧರಾ ಕೆ.ಎಂ. ಅವರ ‘ಭಗ’, ಮುಂಬೈನ ಹೇಮಾ ಸದಾನಂದ ಅಮೀನ್ ಅವರ ‘ರೇಷನ್ ಕಾರ್ಡ್’ ಕತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಸ್ಪರ್ಧೆಯಲ್ಲಿ ಮುಂಬೈ ಹಾಗೂ ಅಖಿಲ ಕರ್ನಾಟಕದಿಂದ ಒಟ್ಟು 40 ಕತೆಗಾರರು ಪಾಲ್ಗೊಂಡಿದ್ದರು. ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್, ಕತೆಗಾರ ಗೋಪಾಲ ತ್ರಾಸಿ ಹಾಗೂ ಕತೆಗಾರ ರಾಜೀವ ನಾಯಕ್ ಪಾಲ್ಗೊಂಡಿದ್ದರು. ಜ.11 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದೇ ‘ಮಧುರವಾಣಿ-50’ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳ್ಳಲಿದೆ ಎಂದು ಕನ್ನಡ ಭವನ ಎಜುಕೇಷನ್ ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ಶೇಖರ ಎ. ಅಮೀನ್ ತಿಳಿಸಿದ್ದಾರೆ.