ಮುಂಬೈ: ಮಂಬೈ ಮಹಾನಗರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಕುರಿತು ಮತ್ತೆ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಇದು ಪಾಕಿಸ್ತಾನದ ಐಎಸ್ಐ ಮತ್ತು ರಾಜಕೀಯ ಪಕ್ಷವೊಂದರ ಷಡ್ಯಂತ್ರವಾಗಿತ್ತು. ಹಿಂದೂ ಭಯೋತ್ಪಾದನೆ ಹುಟ್ಟುಹಾಕುವ ಉದ್ದೇಶದಿಂದ ಈ ದಾಳಿ ನಡೆಸಲಾಯಿತು. ಹಿಂದೂ ಭಯೋತ್ಪಾದಕರು ನಡೆಸಿದ ದಾಳಿ ಎಂಬಂತೆ ಇದನ್ನು ಚಿತ್ರಿಸಲು ಯತ್ನ ನಡೆಸಲಾಯಿತು ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಆದರೆ ಓರ್ವ ಭಯೋತ್ಪಾದಕನನ್ನು ಜೀವಂತವಾಗಿ ಹಿಡಿದ ಬಳಿಕ ಎಲ್ಲ ಸಂಚು ವಿಫಲವಾಯಿತು ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.