ಮುಂಬೈ: ಮಹಾ ನಗರಿ ಮುಂಬೈ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ರಂಜಿತ್ ಸಿಂಗ್ ದಿಯೋಲ್ ಇಂದು ಅಧಿಕಾರ ಸ್ವೀಕರಿಸಿದರು. ಈ ಮೊದಲು ಎಂ ಡಿ. ಯಾಗಿದ್ದ ಅಶ್ವಿನಿ ಭಿಡೆ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ದಿಯೋಲ್ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಿನಿ ಭಿಡೆ ಐದು ವರ್ಷಗಳ ಮೆಟ್ರೋ ಸೇವೆ ಅತ್ಯಂತ ರೋಚಕವಾಗಿತ್ತು ಎಂದು ಬಣ್ಣಿಸಿದರು. ನೂತನ ಎಂ ಡಿ. ದಿಯೋಲ್ ಗೆ ಅವರು ಶುಭ ಹಾರೈಸಿದರು.