newsics.com
ಗುಂಟೂರು(ಆಂಧ್ರಪ್ರದೇಶ): ವಿದ್ಯಾರ್ಥಿನಿಯೊಬ್ಬರನ್ನು ರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುಂಟೂರಿನಲ್ಲಿ ನಡೆದಿದೆ.
4ನೇ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ರಮ್ಯಾ ಕೊಲೆಗೀಡಾದವರು. ಉಪಾಹಾರ ಸೇವನೆಗೆಂದು ಹೊರಟಿದ್ದಾಗ ಬೈಕ್ ನಲ್ಲಿ ಬಂದ ಯುವಕನೋರ್ವ ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾನೆ. ಈ ಭೀಕರ ದೃಶ್ಯ ಘಟನಾ ಸ್ಥಳದ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುಂಟೂರು ನಗರ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನರೆಡ್ಡಿ ಆದೇಶಿಸಿದ್ದಾರೆ. ರಮ್ಯಾ ಕುಟುಂಬಕ್ಕೆ ಸಹಾಯವಾಗಿ 10 ಲಕ್ಷ ರೂ.ಗಳನ್ನು ಘೋಷಿಸಿದ್ದಾರೆ.