ಕಾಸರಗೋಡು: ಮುಸ್ಲಿಂ ದಂಪತಿಯೊಬ್ಬರು ತಮ್ಮ ದತ್ತುಪುತ್ರಿಯ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ನೆರವೇರಿಸಿದ್ದಾರೆ. ಕೇರಳದ ಕಾಸರಗೋಡಿನಲ್ಲಿ ಈ ಘಟನೆ ವರದಿಯಾಗಿದೆ. ವಧು ರಾಜೇಶ್ವರಿ ಅವರ ತಂದೆ ಆ ಮುಸ್ಲಿಂ ದಂಪತಿಯ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಈಗಿರುವಾಗ ರಾಜೇಶ್ವರಿ ಚಿಕ್ಕವರಿರುವಾಗ ಅವರು ಅಸುನೀಗಿದರು. ಬಳಿಕ ರಾಜೇಶ್ವರಿ ಅವರ ಕುಟಂಬಕ್ಕೆ ಈ ಮುಸ್ಲಿಂ ದಂಪತಿಯೇ ಎಲ್ಲ ನೆರವು ನೀಡಿದರು. ತಮ್ಮ ದತ್ತು ಪುತ್ರಿಯಂತೆ ಆಕೆಯನ್ನು ಬೆಳೆಸಿದ್ದರು. ಇದೀಗ ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ರಾಜೇಶ್ವರಿ ಅವರ ವಿವಾಹ ಕೂಡ ನೆರವೇರಿಸಿದ್ದಾರೆ.