newsics.com
ಕೇರಳ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾಗಿ ಪರಮೇಶ್ವರನ್ ನಂಬೂತಿರಿ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಟಿಡಿಬಿ ಮಾಹಿತಿ ನೀಡಿದೆ.
ಮೊದಲಿಗೆ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಸಂದರ್ಶನ ನಡೆಸಿದೆ. ಬಳಿಕ ಶಾರ್ಟ್ ಲಿಸ್ಟ್ ಮಾಡಿದ ಪುರೋಹಿತರ ಹೆಸರಿನ ಚೀಟಿ ಎತ್ತುವ ಮೂಲಕ ಅರ್ಚಕರನ್ನು ಆಯ್ಕೆ ಮಾಡಲಾಗಿದೆ.
ಪಂಡಲಂ ರಾಜಮನೆತನದ ಸದಸ್ಯರಾಗಿರುವ ಗೋವಿಂದ ವರ್ಮ ಅವರು ಚೀಟಿ ಎತ್ತಿದ್ದಾರೆ.