newsics.com
ನವದೆಹಲಿ: ನವರಾತ್ರಿ ವೇಳೆ ರಾಷ್ಟ್ರೀಕೃತ ಬ್ಯಾಂಕ್ ಮುಖ್ಯಸ್ಥರೊಬ್ಬರು ಸಿಬ್ಬಂದಿಗೆ ವಸ್ತ್ರ ಸಂಹಿತೆ ಜಾರಿ ಸಂಬಂಧ ಹೊರಡಿಸಿದ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಈ ಸುತ್ತೋಲೆ ಹೊರಡಿಸಿತ್ತು. ಅಕ್ಟೋಬರ್ 7ರಿಂದ 15ರ ತನಕ ಕರ್ತವ್ಯ ನಿರ್ವಹಣೆ ವೇಳೆ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚಿಸಲಾಗಿತ್ತು. ಪ್ರತಿಯೊಂದು ದಿನ ಒಂದೊಂದು ಕಲರ್ ಬಟ್ಟೆ ಧರಿಸುವಂತೆ ಸೂಚಿಸಲಾಗಿತ್ತು.
ಇದಕ್ಕೆ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸುತ್ತೋಲೆ ರದ್ದುಪಡಿಸಲಾಗಿದೆ. ನವರಾತ್ರಿ ಧಾರ್ಮಿಕ ಹಬ್ಬ. ಸಾರ್ವಜನಿಕ ರಂಗದ ಬ್ಯಾಂಕ್ ಗಳಲ್ಲಿ ಇದನ್ನು ಬಹಿರಂಗವಾಗಿ ಬಲವಂತದಿಂದ ಆಚರಿಸುವಂತಿಲ್ಲ ಎಂದು ಕೆಲವು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದರು.