newsics.com
ಮುಂಬೈ: ಬಾಲಿವುಡ್ ನಲ್ಲಿ ಮಾದಕ ದ್ರವ್ಯದ ನಂಟಿನ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಸಮನ್ಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಎನ್’ಸಿಬಿ ಸೂಚನೆ ನೀಡಿದೆ. ಸೆಪ್ಟೆಂಬರ್ 25ರಂದು ಖ್ಯಾತ ನಟಿ ದೀಪಿಕಾ ಪಡುಕೋಣೆ ವಿಚಾರಣೆಗೆ ಹಾಜರಾಗಲಿದ್ದಾರೆ
ದೀಪಿಕಾ ಅವರ ಜತೆಗೆ ನಟಿಯರಾದ ಸಾರಾ ಆಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಾಕೂಲ್ ಪ್ರೀತ್ ಸಿಂಗ್ ಅವರಿಗೂ ಕೂಡ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಎಲ್ಲರಿಗೂ ಸೂಚಿಸಲಾಗಿದೆ. ಸೆಪ್ಟೆಂಬರ್ 24ರಿಂದ 26 ಮಧ್ಯೆ ನಟಿಯರನ್ನು ವಿಚಾರಣೆಗೆ ಗುರಿಪಡಿಸಲು ಎನ್’ಸಿಬಿ ನಿರ್ಧರಿಸಿದೆ..
ಖ್ಯಾತ ನಟಿಯರಿಗೆ ಎನ್’ಸಿಬಿ ನೋಟಿಸ್ ನೀಡಿರುವುದು ಬಾಲಿವುಡ್ ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.