newsics.com
ಕಾಸರಗೋಡು: ನಮ್ಮ ನಂಬಿಕೆ ಆಚರಣೆಗಳು ಪ್ರಕೃತಿಯ ಜತೆ ಅವಿನಾಭವ ಸಂಬಂಧ ಹೊಂದಿವೆ. ಪ್ರಕೃತಿಯನ್ನು ಶಕ್ತಿ ಎಂದೇ ನಂಬುತ್ತೇವೆ. ಕಾಸರಗೋಡು ಸೇರಿದಂತೆ ಕರಾವಳಿ ತೀರದಲ್ಲಿ ಪ್ರತಿಯೊಂದು ಆಚರಣೆ ಪ್ರಕೃತಿ ಜತೆ ಬೆಸೆದುಕೊಂಡಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ನೆಲ್ಲಿತ್ತಟ್ಟು ಶ್ರೀ ಮಹಾ ವಿಷ್ಣು ಕ್ಷೇತ್ರದಲ್ಲಿ ನ ಸಂಪ್ರದಾಯ.
ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಗುಹಾ ತೀರ್ಥ ಸ್ನಾನ ಹಲವು ವೈಶಿಷ್ಟ್ಯಗಳ ಆಗರವಾಗಿದೆ. ದೇವಸ್ಥಾನದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಇರುವ ಗುಹೆಯೊಳಗೆ ಭಕ್ತರು, ಶ್ರೀ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಪ್ರವೇಶ ಮಾಡುತ್ತಾರೆ.
ಅತ್ಯಂತ ಕಿರಿದಾದ ದಾರಿಯ ಮೂಲಕ ಎರಡು ಬಂಡೆಗಳ ಮೂಲಕ ಒಳ ಪ್ರವೇಶಿಸಬೇಕಾಗಿದೆ. ಭಕ್ತಿ ಭಾವದಿಂದ ತನ್ಮಯತೆಯಿಂದ ಇದರಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಗುಹೆ ಪ್ರವೇಶಿಸಿದ ಬಳಿಕ ಅಲ್ಲಿ ತಂತ್ರಿಗಳ ನೇತೃತ್ವದಲ್ಲಿ ಪೂಜೆಗಳು ನಡೆಯುತ್ತವೆ. ಈ ದೃಶ್ಯವನ್ನು ನೋಡುವ ಭಕ್ತರು ಪುನೀತರಾಗುತ್ತಾರೆ.
ಈ ಬಾರಿಯ ಗುಹಾ ತೀರ್ಥ ಸ್ನಾನ ಡಿಸೆಂಬರ್ 8ರಂದು ನಡೆಯಲಿದೆ. ಗುಹಾ ತೀರ್ಥ ಸ್ನಾನದಲ್ಲಿ ಭಾಗವಹಿಸಲು ಇಚ್ಚಿಸುವವರು ಬೆಳಿಗ್ಗೆ ಎಂಟು ಗಂಟೆಗೆ ದೇವಸ್ಥಾನದಲ್ಲಿ ಹಾಜರಿರಬೇಕಾಗಿದೆ.
ಗುಹಾ ತೀರ್ಥ ಸ್ನಾನದ ಭಾಗವಾಗಿ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ಸೇರಿದಂತೆ ಹಲವು ವೈದಿಕ ಕಾರ್ಯಕ್ರಮಗಳು ನಡೆಯಲಿವೆ.