ಪಾಟ್ನಾ: ಬಿಹಾರದಲ್ಲಿ ಉದ್ಘಾಟನೆಯಾದ 29ನೇ ದಿನದಲ್ಲಿ ಸೇತುವೆಯೊಂದು ಪ್ರವಾಹಕ್ಕೆ ಕೊಚ್ಚಿ ಹೋಗಿದೆ. 264 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. ಬಿಹಾರದ ಗೋಪಾಲಗಂಜ್ ನಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. ಹೊಸ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವುದು ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ದೊರೆತಂತಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತದ ವೈಫಲ್ಯಕ್ಕೆ , ಭ್ರಷ್ಟಾಚಾರಕ್ಕೆ ಇದು ಕೈ ಗನ್ನಡಿ ಎಂದು ಕಾಂಗ್ರೆಸ್ ಟೀಕಿಸಿದೆ.
ಕಳಪೆ ನಿರ್ಮಾಣವೇ ಸೇತುವೆ ಕೊಚ್ಚಿ ಹೋಗಲು ಕಾರಣ ಎಂದು ಆರೋಪಿಸಲಾಗಿದೆ. ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ನಿತೀಶ್ ಕುಮಾರ್ ಸರ್ಕಾರಕ್ಕೆ ಸೇತುವೆ ತಲೆ ನೋವು ಸೃಷ್ಟಿಸಿದೆ