Saturday, June 10, 2023

ಇಷ್ಟು ದಿನ ಹೊಸ ಸಂಸತ್ ಭವನವಾಯ್ತು, ಈಗ ‘ಸೆಂಗೋಲ್’ ಮೇಲೆ ಕೆಸರೆರಚಾಟ: ಯಾಕಿಷ್ಟು ರಾಜಕೀಯ?

Follow Us

newsics.com

ನವದೆಹಲಿ: ಅಲಹಾಬಾದ್ ಮ್ಯೂಸಿಯಂನಲ್ಲಿದ್ದ ಐತಿಹಾಸಿಕ ಚಿನ್ನದ ಸೆಂಗೋಲ್ (ರಾಜದಂಡ) ಅನ್ನು ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಲಾಗುತ್ತಿದೆ.

1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದಾಗ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಮೌಂಟ್ ಬ್ಯಾಟನ್ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಚಿನ್ನದ ಸೆಂಗೋಲ್ ನೀಡಿದ್ದರು. ಈ ಸೆಂಗೋಲ್ ಅನ್ನು 1950ರ ಉತ್ತರಾರ್ಧದಲ್ಲಿ ಅಲಹಾಬಾದ್ ಮ್ಯೂಸಿಯಂಗೆ ಸ್ಥಳಾಂತರಿಸಲಾಗಿತ್ತು. ಕಳೆದ ಏಳು ದಶಕಗಳಿಂದ ಇದು ಈ‌ ಮ್ಯೂಸಿಯಂನಲ್ಲಿತ್ತು.

ನೆಹರೂ ಅವರಿಗೆ ಉಡುಗೊರೆಯಾಗಿ ನೀಡಲಾದ ಸೆಂಗೋಲ್ ಮತ್ತು ಇತರ ವಸ್ತುಗಳನ್ನು ಭಾರತದ ಮೊದಲ ಪ್ರಧಾನಿಯವರ ಪೂರ್ವಜರ ನಿವಾಸವಾದ ಆನಂದ್ ಭವನದಿಂದ ಅಲಹಾಬಾದ್ ಮ್ಯೂಸಿಯಂಗೆ ಸ್ಥಳಾಂತರಿಸಲಾಗಿತ್ತು ಎಂದು ಮ್ಯೂಸಿಯಂ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರು, ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ರಾಜದಂಡ ‘ಸೆಂಗೋಲ್’ ಸ್ವೀಕರಿಸುವಂತೆ ನೆಹರೂ ಅವರಿಗೆ ಸಲಹೆ ನೀಡಿದ್ದರು.

ಈಗ ಹೊಸ ಸಂಸತ್ತಿನ ಸ್ಪೀಕರ್ ಆಸನದ ಬಳಿ ಈ ಸೆಂಗೋಲ್ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರ‌ ಮುಂದಾಗಿದೆ.

ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಆದರೆ ಈ ರಾಜದಂಡದಲ್ಲೂ ಪ್ರತಿಪಕ್ಷಗಳಿಗೆ ರಾಜಕೀಯ ವಾಸನೆ ಬಡಿದಿದೆ.‌ ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿಯವರ ಬದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕೆಂದು ಒತ್ತಾಯಿಸಿದ್ದಲ್ಲದೆ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರ‌ ಕೈಗೊಂಡ ಪ್ರತಿಪಕ್ಷಗಳು ಮುಖಭಂಗಕ್ಕೀಡಾಗಿವೆ. ಆದರೂ ಕಾಂಗ್ರೆಸ್ ಸೆಂಗೋಲ್ ಇತಿಹಾಸದ ಬಗ್ಗೆ ಅಪಸ್ವರವೆತ್ತಿದೆ. ಮೋದಿಯವರ ಸೆಂಗೋಲ್ ಸ್ಥಾಪನೆ ನಿರ್ಧಾರದಿಂದ ಕಾಂಗ್ರೆಸ್ ಸೇರಿದಂತೆ 21ಕ್ಕೂ ಹೆಚ್ಚು ಪ್ರತಿಪಕ್ಷಗಳು‌ ಕಂಗಾಲಾಗಿವೆ.

ಸಿದ್ದರಾಮಯ್ಯ ಸರ್ಕಾರ: ಸಂಪುಟ ಸೇರುವ ಶಾಸಕರ ಪಟ್ಟಿ ಇಲ್ಲಿದೆ

ಮತ್ತಷ್ಟು ಸುದ್ದಿಗಳು

vertical

Latest News

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಗ್ಯಾರಂಟಿ ಜಾರಿ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್

newsics.com ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಬೆನ್ನಲ್ಲೇ ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಕರೆಂಟ್ ಬಿಲ್ ದರ ಏರಿಕೆ ಬಳಿಕ...
- Advertisement -
error: Content is protected !!