ನವದೆಹಲಿ: ದೇವರು ಎಂಬುವನು ಇದ್ದರೆ, ಒಂದು ನಿರ್ಭಯಾ ಘಟನೆ ನಡೆದಿದ್ದಕ್ಕೆ, ಈ ಆರು ಅಪರಾಧಿಗಳನ್ನು ಈ ಭೂಮಿಯಲ್ಲಿ ಹುಟ್ಟಿಸಿದ್ದಕ್ಕೆ ನಾಚಿಕೆಪಟ್ಟುಕೊಳ್ಳುತ್ತಿದ್ದ..!
ಇದು ನಿರ್ಭಯ ಪ್ರಕರಣದ ವಿಚಾರಣೆ ನಡೆಸಿದ ಪಾಟಿಯಾಲ ನ್ಯಾಯಾಲಯದ ನ್ಯಾಯಾಧೀಶರು ವ್ಯಕ್ತಪಡಿಸಿದ ಅಭಿಪ್ರಾಯ.
ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ವಿರುದ್ದದ ವಿಚಾರಣೆ ಮುಂದೂಡಿದಾಗ, ಶೀಘ್ರ ಮರಣದಂಡನೆ ವಿಧಿಸುವಂತೆ ನಿರ್ಭಯಾ ತಾಯಿ ಮನವಿ ಮಾಡಿದರು. ಆಗ ನ್ಯಾಯಾಧೀಶರು, “ನಿಮಗೆ ಆಗಿರುವ ಅನ್ಯಾಯದ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ. ಆದರೆ, ನಾವು ಕಾನೂನುಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದರು.