ನವದೆಹಲಿ: ನಿರ್ಭಯಾ ಅತ್ಯಾಚಾರ ಆರೋಪಿಗಳ ಬಗ್ಗೆ ಕರುಣೆ ತೋರಿಸಬೇಕು. ಈ ವಿಷಯದಲ್ಲಿ ರಾಜೀವ್ ಗಾಂಧಿ ಹಂತಕರ ವಿಷಯದಲ್ಲಿ ಸೋನಿಯಾ ಗಾಂಧಿ ತಳೆದ ನಿಲುವು ಮಾದರಿಯಾಗಬೇಕು ಎಂದು ಸಲಹೆ ನೀಡಿದ್ದ ಹಿರಿಯ ನ್ಯಾಯವಾದಿ ಇಂದಿರಾ ಜೈ ಸಿಂಗ್ ಮಾತಿಗೆ ನಿರ್ಭಯಾ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಯಾವುದೇ ಸಲಹೆ ಬೇಕಾಗಿಲ್ಲ ಇಂದಿರಾ ಜೈ ಸಿಂಗ್ ಪ್ರಚಾರ ಬಯಸುತ್ತಿದ್ದಾರೆ. ಅತ್ಯಾಚಾರಿಗಳ ಮನೆಗೆ ಅವರು ಭೇಟಿ ನೀಡುತ್ತಿದ್ದಾರೆ ಎಂದು ನಿರ್ಭಯಾ ತಾಯಿ ಆರೋಪಿಸಿದ್ದಾರೆ.