ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲು ಇಬ್ಬರು ಪರಿಣತ ವ್ಯಕ್ತಿಗಳನ್ನು ಒದಗಿಸುವಂತೆ ಉತ್ತರಪ್ರದೇಶ ಜೈಲು ನಿರ್ದೇಶನಾಲಯಕ್ಕೆ ತಿಹಾರ್ ಜೈಲು ನಿರ್ದೇಶನಾಲಯ ಪತ್ರ ಬರೆದಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ನೇಣು ಹಾಕುವ ವ್ಯಕ್ತಿಗಳು ಜ. 20ರಂದು ಜೈಲು ತಲುಪಲಿದ್ದಾರೆ ಎಂದಿದೆ.