newsics.com
ಚೆನ್ನೈ: ನಿವಾರ್ ಚಂಡಮಾರುತ ಇಂದು (ನ.25) ತಡರಾತ್ರಿ 2 ಗಂಟೆ ವೇಳೆಗೆ ಸಮುದ್ರದಿಂದ ಚೆನ್ನೈ ಭೂಪ್ರದೇಶಕ್ಕೆ ಅಪ್ಪಳಿಸಲಿದೆ.
ಎನ್ ಡಿಆರ್ ಎಫ್ ನ ಡಿಜಿ ಎಸ್ಎನ್ ಪ್ರಧಾನ್ ಈ ಬಗ್ಗೆ ಮಾಹಿತಿ ನೀಡಿದ್ದು, ತಮಿಳುನಾಡಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪಾಂಡಿಚೆರಿಗಳಲ್ಲಿ 1,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಚಂಡಮಾರುತದ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಎನ್ ಡಿಆರ್ ಎಫ್ ಈಗಾಗಲೇ ಹಲವು ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಈ ತಂಡಗಳು ತೊಡಗಲಿವೆ ಎಂದು ಎನ್ ಡಿಆರ್ ಎಫ್ ನ ಡಿಜಿ ಪ್ರಧಾನ್ ಹೇಳಿದ್ದಾರೆ. ಚಂಡಮಾರುತ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ಕೊನೆಯ ಹಂತದ ವೇಲ್ ಯಾತ್ರೆಯನ್ನು ರದ್ದುಗೊಳಿಸಿದ್ದು, ಅಂತಿಮ ಹಂತದ ಕಾರ್ಯಕ್ರಮ ಡಿ.5ರಂದು ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಳೆಯಿಂದ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ
ನೀಲಿ ಬಣ್ಣದಿಂದ ಕಂಗೊಳಿಸಿದ ಸಮುದ್ರದ ಅಲೆಗಳು: ಅಚ್ಚರಿಗೊಂಡ ಜನ