ದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ ಭೂಪ್ರದೇಶವನ್ನು ತಾನು ವಶಪಡಿಸಿಕೊಂಡಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಇದು ಸುಳ್ಳು ಸುದ್ದಿ. ಇಂತಹ ವದಂತಿಗಳನ್ನು ಪಾಕಿಸ್ತಾನ ಮೂಲದ ಸಂಸ್ಥೆಗಳೇ ಹಬ್ಬಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳೆಲ್ಲ ಬರೀ ವದಂತಿಗಳಷ್ಟೇ ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭೂಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪಾಕಿಸ್ತಾನ ಮೂಲದ ಸಂಸ್ಥೆಗಳಿಂದ ಹರಡಲಾಗಿದೆ. ಇದು ಪಾಕಿಸ್ತಾನದ ಮತ್ತೊಂದು ಕುತಂತ್ರಿ ಬುದ್ಧಿ ಎಂದು ಭಾರತೀಯ ಸೇನೆ ಆರೋಪಿಸಿದೆ.