ನವದೆಹಲಿ : ದೇಶದ ಸೇನಾಪಡೆಯಲ್ಲಿ ಪುರುಷರಿಗೆ ಸಿಗುವ ಸ್ಥಾನಮಾನ ಮಹಿಳಾ ಅಧಿಕಾರಿಗಳಿಗೆ ಲಭಿಸಬೇಕು. ಸೇನಾಪಡೆಗಳನ್ನು ಮುನ್ನೆಡೆಸುವುದು ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಅವರಿಗೆ ಅವಕಾಶ ನೀಡಬೇಕು. ಲಿಂಗ ಆಧಾರಿತ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಶಬ್ದಗಳಲ್ಲಿ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಪರ್ಮನೆಂಟ್ ಕಮಿಷನ್ ಹುದ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಈ ಸಂಬಂಧ ದೆಹಲಿ ಹೈಕೋಟ್ ನೀಡಿದ್ದ ಆದೇಶವನ್ನು ಪಾಲಿಸದಕ್ಕೆ ಸುಪ್ರೀಂ ಕೋರ್ಟ್ ಛಾಟಿಯೇಟು ಬೀಸಿದೆ. ಈ ಹಿಂದೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಹಲವು ಕಾರಣಗಳನ್ನು ನೀಡಿತ್ತು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಮಹಿಳೆಯರು ಇದರಿಂದ ಸ್ವಾಭಾವಿಕವಾಗಿ ಸಮಸ್ಯೆ ಎದುರಿಸುವ ಸಾಧ್ಯತೆಗಳಿವೆ. ಅಲ್ಲದೆ ಹೆಚ್ಚಿನ ಸೇನಾ ಸಿಬ್ಬಂದಿ ಗ್ರಾಮೀಣ ಪ್ರದೇಶದಿಂದ ಬಂದವರಾಗಿರುತ್ತಾರೆ. ಅವರಿಗೆ ಮಹಿಳಾ ಅಧಿಕಾರಿ ಮುನ್ನೆಡೆಸುವುದನ್ನು ಒಪ್ಪಿಕೊಳ್ಳಲು ಮಾನಸಿಕವಾಗಿ ಕಷ್ಟವಾಗಬಹುದು. ಯುದ್ದ ಸಂದರ್ಭದಲ್ಲಿ ಯುದ್ದ ಖೈದಿಗಳಾದರೆ ಪರಿಸ್ಥಿತಿ ಊಹಿಸಲು ಕಷ್ಟವಾಗಬಹುದು ಎಂಬ ಕಾರಣವನ್ನು ನೀಡಿತ್ತು.