Newsics.com
ಶಬರಿಮಲೆ: ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿಲ್ಲೆಯಲ್ಲಿ ಅಕ್ಟೋಬರ್ 21ರ ತನಕ ಅಯ್ಯಪ್ಪ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಭಕ್ತರ ಸುರಕ್ಷತೆ ಗಮನದಲ್ಲಿರಿಸಿ ತಿರುವಾಂಕೂರು ಆಡಳಿತ ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ. ತುಲಾ ಮಾಸ ಪೂಜೆಗಾಗಿ ಇದೀಗ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಅಕ್ಟೋಬರ್ 21ರಂದು ಬಾಗಿಲು ಮುಚ್ಚಲಾಗುವುದು. ಪ್ರತಿ ತಿಂಗಳು 5 ದಿನ ದೇಗುಲದ ಬಾಗಿಲು ತೆರೆಯಲಾಗುತ್ತದೆ.
ಶಬರಿಮಲೆ ಪರಿಸರದ ಪಂಪಾ ನದಿ ಉಕ್ಕಿ ಹರಿಯುತ್ತಿದೆ.